ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಒಟ್ಟು 86 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. SSLC ಹಾಗೂ PUC ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.
ಹುದ್ದೆಗಳ ವಿವರ
- ಬೆರಳಚ್ಚುಗಾರ (Typist): 08
- ನಕಲು-ಬೆರಳಚ್ಚುಗಾರ (Typist-Copyist): 18
- ಆದೇಶ ಜಾರಿಕಾರ (Process Server): 24
- ಜವಾನ (Peon): 36
- ಒಟ್ಟು: 86 ಹುದ್ದೆಗಳು
ಶೈಕ್ಷಣಿಕ ಅರ್ಹತೆ
- Typist: ದ್ವಿತೀಯ PUC/ತತ್ಸಮಾನ ಅಥವಾ 3 ವರ್ಷದ ಡಿಪ್ಲೊಮಾ + ಕನ್ನಡ ಮತ್ತು ಇಂಗ್ಲಿಷ್ ಹಿರಿಯ ಶ್ರೇಣಿ ಟೈಪಿಂಗ್ ಅರ್ಹತೆ.
- Typist-Copyist: ದ್ವಿತೀಯ PUC/ತತ್ಸಮಾನ ಅಥವಾ 3 ವರ್ಷದ ಡಿಪ್ಲೊಮಾ + ಕನ್ನಡ ಮತ್ತು ಇಂಗ್ಲಿಷ್ ಕಿರಿಯ ಶ್ರೇಣಿ ಟೈಪಿಂಗ್ ಅರ್ಹತೆ.
- Process Server: SSLC/ತತ್ಸಮಾನ.
- Peon: SSLC/ತತ್ಸಮಾನ ಹಾಗೂ ಕನ್ನಡ ಓದಲು-ಬರೆಯಲು ತಿಳಿದಿರಬೇಕು.
ವೇತನ
- Typist / Typist-Copyist: ₹34,100 – ₹67,600
- Process Server: ₹31,775 – ₹61,300
- Peon: ₹27,000 – ₹46,675
ವಯೋಮಿತಿ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 06-11-2026ಕ್ಕೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ವರ್ಗಾವಾರು ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ
- ಸಾಮಾನ್ಯ ಅಭ್ಯರ್ಥಿಗಳು: ₹200
- 2A/2B/3A/3B: ₹100
- SC/ST/Category-1/PwD: ಶುಲ್ಕ ವಿನಾಯಿತಿ
ಪ್ರಮುಖ ದಿನಾಂಕ
- ಅರ್ಜಿ ಆರಂಭ: 07 ಅಕ್ಟೋಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ನವೆಂಬರ್ 2026
ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.